Skip to content

ವಿಷ್ಣು ಸಹಸ್ರನಾಮ | Vishnu Sahasranama in Kannada PDF

Get Vishnu Sahasranama in Kannada PDF For Free

PDF Name: Vishnu Sahasranama in Kannada PDF
No. of Pages: 247
PDF Size: 1.3 MB
Language: Kannada
Category: Religion & Spirituality

ವಿಷ್ಣು ಸಹಸ್ರನಾಮ | Vishnu Sahasranama in Kannada

ನಮ್ಮಲ್ಲಿ ಹೆಚ್ಚಿನವರು ವಿಷ್ಣು ಸಹಸ್ರನಾಮವನ್ನು ಭಕ್ತಿಯಿಂದ ಪ್ರತಿದಿನ ಪಾರಾಯಣ ಮಾಡುತ್ತಾರೆ. ಆದರೆ ಹೀಗೆ ಪಾರಾಯಣ ಮಾಡುವವರಲ್ಲಿ ಹೆಚ್ಚಿನವರಿಗೆ ಭಗವಂತನ ಈ ಸಹಸ್ರ ನಾಮದ ಹಿಂದಿರುವ ಅತ್ಯದ್ಭುತ ಗುಣಾನುಸಂಧಾನದ ಅರಿವಿಲ್ಲ!

ನಾವು ವಿಷ್ಣು ಸಹಸ್ರನಾಮವನ್ನು ಪೂರ್ಣವಾಗಿ ಎಷ್ಟು ಬಾರಿ ಪಾರಾಯಣ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ-ಬದಲಿಗೆ ಪ್ರತೀ ನಾಮದ ಹಿಂದಿರುವ ಭಗವಂತನ ಗುಣಾನುಸಂಧಾನವನ್ನು ಎಷ್ಟು ತಿಳಿದಿದ್ದೇವೆ ಎನ್ನುವುದು ಮುಖ್ಯ.

ದಿನದಲ್ಲಿ ಅರ್ಥ ತಿಳಿಯದೇ ಸಾವಿರ ನಾಮವನ್ನು ಅನೇಕ ಬಾರಿ ಪಾರಾಯಣ ಮಾಡುವುದಕ್ಕಿಂತ, ಒಂದು ನಾಮದಲ್ಲಿ ಭಗವಂತನ ಗುಣಾನುಸಂಧಾನ ಶ್ರೇಷ್ಠ. ಈ ಹಿನ್ನೆಲೆಯಲ್ಲಿ ಇಲ್ಲಿ ನಾವು ಅಧ್ಯಾತ್ಮ ಬಂಧುಗಳಿಗಾಗಿ ಈ ಪುಸ್ತಕವನ್ನು ಪ್ರಸ್ತುತ ಪಡಿಸುತ್ತಿದ್ದೇವೆ.

ಇಲ್ಲಿ ಸಹಸ್ರನಾಮದ ಒಂದೊಂದು ಶ್ಲೋಕವನ್ನು ಪ್ರಸ್ತುತಪಡಿಸಿ ನಂತರ ಆ ಶ್ಲೋಕದಲ್ಲಿರುವ ಭಗವಂತನ ನಾಮದ ಗುಣಾನುಸಂಧಾನವನ್ನು ಸಂಕ್ಷಿಪ್ತವಾಗಿ ವಿಶ್ಲೇಷಿಸಲಾಗಿದೆ.

ವಿಷ್ಣು ಸಹಸ್ರನಾಮದಲ್ಲಿರುವ ಭಗವಂತನ ಪ್ರತಿಯೊಂದು ನಾಮದ ಹಿಂದೆ ಕನಿಷ್ಠ ನೂರು ಅರ್ಥಗಳಿವೆಯಂತೆ. ಆದರೆ ಒಬ್ಬ ಸಾಮಾನ್ಯ ಮಾನವನಿಗೆ ಇಷ್ಟೊಂದು ವಿಷಯಗಳನ್ನು ಪೂರ್ಣವಾಗಿ ತಿಳಿದು ಪಾರಾಯಣ ಮಾಡುವುದು ಕಷ್ಟ.

ಆದ್ದರಿಂದ ಇಲ್ಲಿ ನಾವು ಒಂದು ನಾಮದ ನೂರು ಅರ್ಥವನ್ನು ಹುಡುಕುವ ಪ್ರಯತ್ನ ಮಾಡಬೇಕಾಗಿಲ್ಲ. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಯೊಂದು ನಾಮದ ಕನಿಷ್ಠ ಒಂದು ಅರ್ಥವನ್ನಾದರೂ ತಿಳಿದು ಪಾರಾಯಣ ಮಾಡಿದರೆ ಅದು ಮಹಾ ಪುಣ್ಯಕರ್ಮವಾಗುತ್ತದೆ.

ವೈದಿಕ ವಾಲ್ಮೀಯದಲ್ಲಿ ಏಳಂಟಂ ಸಹಸ್ರ ನಾಮ ಸ್ತೋತ್ರಗಳು ಒಂದಿನ ವಾರದೀಯ ಪುರಾಣದಲ್ಲಿ (ಪೂರ್ವಖಂಡ ೮೯) ಲಲಿತಾಸಹಸ್ರನಾಮ ಸ್ತೋತ್ರ ಹಾಗೂ (ಪೂರ್ವ ಖಂಡ-೮೨) ರಾಧಾಕೃಷ್ಣಸಹಸ್ರನಾಮ ಸ್ತೋತ್ರ, ಸ್ಕಾಂದ ಪುರಾಣದಲ್ಲಿ (ಕಾಶೀಖಂಡ೨೯) ಗಂಗಾಸಹಸ್ರನಾಮ ಸ್ತೋತ್ರ, ಕೂರ್ಮ ಪುರಾಣದಲ್ಲಿ (೧೨) ದೇವೀಸಹಸ್ರನಾಮ ಸ್ತೋತ್ರ,

ಗರುಡ ಪುರಾಣದಲ್ಲಿ (ಪೂರ್ವಖಂಡ-ಆಚಾರಕಾಂಡ-೧೫) ಶ್ರೀವಿಷ್ಣು ಸಹಸ್ರನಾಮ ಸ್ತೋತ್ರ, ಪದ್ಮಪುರಾಣದಲ್ಲಿ (ಉತ್ತರಖಂಡ-೭೨) ಶ್ರೀವಿಷ್ಣು ಸಹಸ್ರನಾಮ ಸ್ತೋತ್ರ ಮತ್ತು ಮಹಾಭಾರತದಲ್ಲಿ (ಶಾಂತಿಪರ್ವ-೨೮೪ ಮತ್ತು ಅನುಶಾಸನಪರ್ವ-೧೭) ಶಿವಸಹಸ್ರನಾವು ನತ್ರಗಳು-ಹೀಗ ಐದು ಸಹಸ್ರ ನಾವ,

ಸ್ತೋತ್ರಗಳು ರುದ್ರ, ಲಲಿತಾ, ಗಂಗಾ ವಂತಾದ ಇತರ ದೇವತಾ ಪರಗಳಾಗಿ ಹೊರಟಿರುವವಾದರೆ, ಮರು ಸಹಸ್ರನಾಮ ಸ್ತೋತ್ರಗಳು ಭಗವಂತನ ಬಗ್ಗೆಯೇ ಹೊರಟಿವೆ ಅವುಗಳಲ್ಲಿ ಗರಡ ಪುರಾಣದಲ್ಲಿ ಹಾಗೂ ಪದ್ಮಪುರಾಣದಲ್ಲಿ ಪರಿತಗಳಾಗಿರುವ ಸಹಸ್ರನಾಮ ಸ್ತೋತ್ರಗಳು ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಗಳೆಂದೇ ಪ್ರಸಿದ್ಧಗಳಾಗಿವೆ.

ಮಿಶ್ರಸ್ತುತಿಯ ಕುರಿತಾದ ಈ ವಿವರಣೆಯಿಂದ ರುದ್ರ, ಲಲಿತಾದೇವಿ, ಗಂಗಾದೇವಿ, ಮುಂತಾದ ಇತರ ದೇವತೆಗಳ ಕುರಿತು ಹೊರಟಿರುವ ಸಹಸ್ರನಾಮ ಸ್ತೋತ್ರಗಳು ಸಾಧ ನಯ ದೃಷ್ಟಿಯಲ್ಲಿ ಅಷ್ಟೊಂದು ಉಪಯೋಗಕ್ಕೆ ಬರಲಾರವೆಂಬುದು ಸ್ಪಷ್ಟ ವಾಗದಿರದು,

ರುದ್ರಾದಿಗಳ ಉತ್ಕರ್ಷವನ್ನೇ ಮೇಲ್ನೋಟಕ್ಕೆ ಸಾರುತ್ತಿರುವ ಶಿವ ಸಹಸ್ರ ನಾಮ ಸ್ತೋತ್ರವೇ ಮುಂತಾದವು ‘ವಿಶ್ರಸ್ತುತಿ’ ಗಳೇ ಆಗಿದ್ದು, ಅವುಗಳ ಮೂಲಕ ಸಾಧನೆಯನ್ನು ನಡೆಸುವಾಗ ‘ವಿಶ್ರಸತಿ’ ಯ ಕುರಿತಾಗಿ ಇರಬೇಕಾದ ಅನುಸಂಧಾನವನ್ನೇ ಅಳವಡಿಸಿಕೊಳ್ಳಬೇಕು. ಈ ಅನುಸಂಧಾನವು ಭಗವಂತನನ್ನೇ ನೇರವಾಗಿ, ಸ್ಪಷ್ಟವಾಗಿ ಪ್ರತಿಪಾದಿಸುತ್ತಿರುವ ಶುದ್ಧ ಸ್ತುತಿ’ ಯ ಕುರಿತು

ಅಳವಡಿಸಿಕೊಳ್ಳಬೇಕಾದ ಅನುಸಂಧಾನ ದಷ್ಟು ಸುಲಭಸಾಧ್ಯವಲ್ಲ ಪ್ರಯಾಸಸಾಧ್ಯವಾದ ಆ ಅನುಸಂಧಾನವಿಲ್ಲದೆ, ಅಂದರೆ ಸ್ತುತಿ ಯಲ್ಲಿ ಮೇಲ್ನೋಟಕ್ಕೆ ಕಾಣುವಂತೆ ರುದ್ರಾದಿಗಳ ಮಹಿಮೆಯನ್ನೇ ಅವರಿಸಂಧಾನ ಮಾಡಿ ಕೊಂಡರೆ ಅದರಿಂದಾಗಿ ಭಗವಂತನ ವ್ಯಕ್ತಿತ್ವಕ್ಕೆ ಅಪಚಾರ ಮಾಡಿದಂತಾಗುವುದಲ್ಲದೆ ಅಂತಹ ಅನುಸಂಧಾನ ಪೂರ್ವಕವಾದ ಸ್ತುತಿಯಿಂದ ರುದ್ರಾದಿದೇವತೆಗಳೂ ಪ್ರಸನ್ನರಾಗ

Vishnu Sahasranama in Kannada PDF Download in Hindi for free using the direct download link given at the bottom of this article.

Leave a Reply

Your email address will not be published.